/newsfirstlive-kannada/media/post_attachments/wp-content/uploads/2024/06/Hassan-Shootout-Case.jpg)
ಹಾಸನದಲ್ಲಿ ಇಂದು ಮಧ್ಯಾಹ್ನ ಗುಂಡಿನ ಸದ್ದು ಕೇಳಿ ಬಂದಿದ್ದು, ಶೂಟೌಟ್‌ಗೆ ಇಬ್ಬರು ಸಾವನ್ನಪ್ಪಿದ್ದಾರೆ. ಹೊಯ್ಸಳ ನಗರದಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಸಾವನ್ನಪ್ಪಿದ ಇಬ್ಬರಲ್ಲಿ ಒಬ್ಬರು ಹಾಸನದ ಶರಾಫತ್ ಆಲಿ ಹಾಗೂ ಬೆಂಗಳೂರಿನ ಆಶಿಫ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಮಹಮದ್ ಸುಜೇತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಯ್ಸಳ ನಗರದಲ್ಲಿ ಇವತ್ತು ಮಧ್ಯಾಹ್ನ 12.30ರಿಂದ 1 ಗಂಟೆ ಸಮಯದಲ್ಲಿ ಸಾರ್ವಜನಿಕರೊಬ್ಬರು ಪೊಲೀಸರಿಗೆ ಕರೆ ಮಾಡಿ ಕೊಲೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಇಬ್ಬರು ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ.
ಕೊಲೆಯಾಗಿದ್ದು ಹೇಗೆ?
ಹಾಸನ ಎಸ್‌ಪಿ ಮಹಮದ್ ಸುಜೇತಾ ನೀಡಿರುವ ಮಾಹಿತಿ ಪ್ರಕಾರ ಇಬ್ಬರನ್ನು ಹೊರಗಿನವರು ಯಾರು ಕೊಲೆ ಮಾಡಿ ಹೋಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಮತ್ತೊಬ್ಬರಿಗೆ ಶೂಟ್ ಮಾಡಿ ಆಮೇಲೆ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!
ಇಬ್ಬರು ವ್ಯಕ್ತಿ ಹೊಯ್ಸಳ ನಗರದ ಒಂದು ಸಣ್ಣ ಸೈಟ್ ನೋಡಲು ಬಂದಿದ್ದಾರೆ. ಇಬ್ಬರು ಸೈಟ್ ಬಗ್ಗೆ ಮಾತನಾಡಿಕೊಂಡಿದ್ದನ್ನ ಅಕ್ಕ-ಪಕ್ಕದ ಮನೆಯವರು ನೋಡಿದ್ದಾರೆ. ಇದಾದ ನಂತರ ಗುಂಡಿನ ಸದ್ದು ಕೇಳಿ ಬಂದಿದೆ. ಸೈಟ್ ಬಗ್ಗೆ ಮಾತನಾಡುತ್ತಾ ಕಾರಿನ ಹತ್ರ ಇಬ್ಬರು ಬಂದಿದ್ದಾರೆ. ಆಗ ಶೂಟೌಟ್ ಮಾಡಿಕೊಂಡು ಒಬ್ಬರು ಕಾರಿನ ಹೊರಗೆ ಮತ್ತು ಕಾರಿನ ಒಳಗಡೆ ಸತ್ತು ಬಿದ್ದಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಕಟ್ಟಿಹಾಕಲು ರಶೀದ್ ಖಾನ್ ಪ್ಲಾನ್.. ಭಯಂಕರ ಅಸ್ತ್ರ ಪ್ರಯೋಗಿಸ್ತೀವಿ ಎಂದ ಅಫ್ಘಾನ್
ಕಾರಿನ ಹೊರಗೆ ಇದ್ದವರ ತಲೆಗೆ ಗುಂಡು ಹಾರಿಸಲಾಗಿದೆ. ಕಾರಿನ ಒಳಗೆ ಇದ್ದವರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಎಸ್‌ಪಿ ಮಹಮದ್ ಸುಜೇತಾ ಅವರು ತಿಳಿಸಿದ್ದಾರೆ. ಒಬ್ಬರು ಮತ್ತೊಬ್ಬರಿಗೆ ಫೈರ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಜಾಗದಲ್ಲಿರುವ ಕಾರಿನ ರಿಜಿಸ್ಟ್ರೇಷನ್ ನಂಬರ್ ಮೈಸೂರು ಜಿಲ್ಲೆಯದ್ದು.
ಹಾಸನದಲ್ಲಿ ಹಾಡಹಗಲೇ ಶೂಟ್ಔಟ್ ಆಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆಶ್ಚರ್ಯ ಎನ್ನುವಂತೆ ಇಬ್ಬರ ಮಧ್ಯೆ ಮಾತುಕತೆ ನಡೆದು, ಒಬ್ಬ ಮತ್ತೋರ್ವನಿಗೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹಾಸನ ಎಸ್.ಪಿ ಮಹಮದ್ ಸುಜೀತಾ ಪ್ರಾಥಮಿಕ ತನಿಖಾ ಮಾಹಿತಿ ನೀಡಿದ್ದಾರೆ. #SPMohammadSujeetha#HassanIncidentpic.twitter.com/mAUjxD8e8w
— NewsFirst Kannada (@NewsFirstKan)
ಹಾಸನದಲ್ಲಿ ಹಾಡಹಗಲೇ ಶೂಟ್ಔಟ್ ಆಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆಶ್ಚರ್ಯ ಎನ್ನುವಂತೆ ಇಬ್ಬರ ಮಧ್ಯೆ ಮಾತುಕತೆ ನಡೆದು, ಒಬ್ಬ ಮತ್ತೋರ್ವನಿಗೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹಾಸನ ಎಸ್.ಪಿ ಮಹಮದ್ ಸುಜೀತಾ ಪ್ರಾಥಮಿಕ ತನಿಖಾ ಮಾಹಿತಿ ನೀಡಿದ್ದಾರೆ. #SPMohammadSujeetha#HassanIncidentpic.twitter.com/mAUjxD8e8w
— NewsFirst Kannada (@NewsFirstKan) June 20, 2024
">June 20, 2024
ಕೊಲೆಯಾದ ಜಾಗದಲ್ಲಿ ಇವರಿಬ್ಬರು ಬಿಟ್ರೆ ಬೇರೆ ಯಾರು ಬಂದ ಮಾಹಿತಿ ಇಲ್ಲ. ಪ್ರಾಥಮಿಕ ಮಾಹಿತಿಯಲ್ಲಿ ಒಬ್ಬರನ್ನ ಕೊಲೆ ಮಾಡಿ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರು ಸೀಜ್ ಮಾಡಿರುವ ಹಾಸನ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಗುಂಡಿನ ದಾಳಿಯಲ್ಲಿ ಮೃತ ಪಟ್ಟವರು ಆಸ್ತಿ ವಿಚಾರದಲ್ಲಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ